ಜೀವಕ್ಕಾಗಿ ಜೀವನವೋ , ಜೀವನಕ್ಕಾಗಿ ಜೀವವೋ

by 01:52 1 comments


ಭಾವಗಳ ಜಗದಲ್ಲಿ ನೋವು ಸಹಜ , ಜೀವನದಲ್ಲಿ ಹಲವು ನೋವುಗಳನ್ನು ಅನುಭವಿಸುವ ದಿಯಾ ಪಾತ್ರ .  ಈ ಕವನಕ್ಕೆ ಸ್ಪೂರ್ತಿಯಾಗಿದೆ  . An Introvert who resides in each and every one of us. who suffers a lot  and only come out when we feel a lot of pain is the person who is telling this poem. 




ಬಂಧಿಯಾದೆನು ನಾನು ನನ್ನೊಳಗೆ ,
ಹೊರಗೆ ಬರಲು ಅಳುಕು ನನಗೆ ,
ಬಂದರೆಲ್ಲಿ ಕಣ್ಣು ನೋಯುವಷ್ಟು ತೋಯುವುದೋ ,
ನಿಂದರೆಲ್ಲಿ ಮನವು ಸಾಯುವಷ್ಟು ನೋಯುವುದೋ ।।

ಭಾವಕೆ ನೀರೆರೆಯುವ ನೀನಿಲ್ಲದೆ ,
ನಾನೆಂಬುದು , ಕನ್ನಡಿಯ ಒಂದು ಬಿಂಬವಾಗಿದೆ ,
ಜೀವಕೆ ಜೇನೆರೆಯುವ ನೀನಿಲ್ಲದೆ ,
ಸಿಹಿಯಲ್ಲು ಕಹಿಯಲ್ಲು ವ್ಯತ್ಯಾಸ ಕಾಣದಾಗಿದೆ ।।

ಈ ಭಾವನೆಗಳು ಭೂತವಾಗಿವೆ ,
ಕಾಡುವ ಬದಲು ಕೆಲವೊಮ್ಮೆ ಮುದ ನೀಡಿವೆ ,
ಭೂತದಲ್ಲೆ ಬದುಕುವ ಹಂಬಲ ಮೂಡಿದೆ ,
ವಾಸ್ತವವು ಸತ್ವವಿಲ್ಲದ ಹೊರೆಯಾಗಿ ಕಂಡಿದೆ ।।

ಬದುಕಿನ ಪುಟ ತಿರುವಿದರೆ ,
ಖಾಲಿ ಹಾಳೆಯೇನೋ ಕಾದಿದೆ ,
ಆದರೆ, ಒತ್ತಿ ಬರೆದ ಅಕ್ಷರಗಳ ಗುರುತು ,
ಬಿಳಿಹಾಳೆಯಲ್ಲೂ ಮಾಸದಂತೆ ಉಳಿದಿದೆ ।।

ನೆನಪಿನ ಕಣ್ಣೀರು , ಭಾವದ ಬಿಸಿಯುಸಿರು ,
ಮರುಕಳಿಸುವ ನೋವು ,ಬರವಣಿಗೆಯನ್ನೇ ಕಟ್ಟಿ ಹಾಕಿದೆ ,
ಜೀವಕ್ಕಾಗಿ  ಜೀವನವೋ , ಜೀವನಕ್ಕಾಗಿ ಜೀವವೋ ,
ಏನೊಂದೂ ತಿಳಿಯದೆ ಮತ್ತೆ ನೊಂದಿದೆ ।।

ನೊಂದ ಸಾವಿರಾರು ಮನಗಳಿಗೆ ಈ ಗೀತೆಯ ಅರ್ಪಿಸಿದೆ ...... 


- ನವೀನಸ್ಪೂರ್ತಿ 


manvantarada-kavithegalu

Manvantarada Kavi

Kavana havyasa , coding dinakelasa

1 comment:

  1. ಚೆನ್ನಾಗಿದೆ.ಈ ಕೆಳಗಿನ ಸಾಲುಗಳು ಅದ್ಭುತವಾಗಿವೆ
    ಬದುಕಿನ ಪುಟ ತಿರುವಿದರೆ ,
    ಖಾಲಿ ಹಾಳೆಯೇನೋ ಕಾದಿದೆ ,
    ಆದರೆ, ಒತ್ತಿ ಬರೆದ ಅಕ್ಷರಗಳ ಗುರುತು ,
    ಬಿಳಿಹಾಳೆಯಲ್ಲೂ ಮಾಸದಂತೆ ಉಳಿದಿದೆ

    ReplyDelete