ಕೊನೆಯ ದಿನ
ನಮ್ಮ ಜೀವನದಲ್ಲಿ ಸಮಯದ ಲೆಕ್ಕ ತುಂಬಾ ಚೆಂದ , ಎಷ್ಟು ಬೇಗ ೨೦೧೭ ಮುಗಿದೇ ಹೋಯಿತು ಈ ವರ್ಷ ಹಲವರಿಗೆ ಹಲವು ಬಗೆಯ ನೋವು ನಲಿವನ್ನು ತಂದಿದೆ . ನಿಮ್ಮ ಸಾಧನೆಯ ಹಾದಿಯಲ್ಲಿ ನಿಮ್ಮನ್ನು ತುಂಬಾ ದೂರ ಕರೆದುಕೊಂಡು ಬಂದಿದೆ .
ಎಲ್ಲದಕ್ಕೂ ಒಂದು ಕೊನೆ ಇದ್ದ ಹಾಗೆ ಹುಟ್ಟಿದ ಈ ವರ್ಷಕ್ಕೂ ಇಂದು ಕಡೇ ದಿನ .
ಈ ವರ್ಷಕ್ಕೆ ವಿದಾಯ ಹೇಳುತ್ತಾ ಮುಂದಿನ ವರ್ಷವ ಎಲ್ಲರೂ ಸೊಂತೋಶದಿಂದ ಬರಮಾಡಿಕೊಳ್ಳೋಣ .
ಮುಂಗಡವಾಗಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು
ದಿನಗಳ ಲೆಕ್ಕ ಖಾಲಿಯಾಯಿತು
ನಾ ನಿಂತ ನೆಲವು ,
ಓಡುವ ಸೂರ್ಯನ ಸುತ್ತ
ಒಂದು ಸುತ್ತು ಓಡಿ ಬಂದಿತು ।।
ಜೀವದ ಲೆಕ್ಕ ಕಡಿಮೆಯಾಯಿತು
ನೆಲದ ಮೇಲೆ ನಿಂತವರೆಲ್ಲರ ಬಾಳಲ್ಲಿ
ಒಂದು ವರ್ಷ ಕಳೆದೇ ಹೋಯಿತು ।।
ಜೀವನದ ಲೆಕ್ಕ ಹೆಚ್ಚಾಯಿತು
ಬಾಳಲ್ಲಿ ಹರುಷದ ಹೋಳಿಗೆ ಉಂಡು
ಗೋಳಲ್ಲಿ ನೋವಿನ ಬೇವನ್ನು ತಿಂದು ,
ಬದುಕಿನ ಸುಖ ದುಃಖಗಳಿಗೆ ನಕ್ಕು ಅತ್ತಾಯಿತು ।।
ಬದುಕಿನ ಲಹರಿಗೆ , ವರುಷದ ಗಾಯನ ,
ಜೀವನ ಹೂಬನ , ನವೀನ ಚೇತನ ,
ಸೊಬಗಿನ ಅಲೆಯಲಿ ,ಸುರಿದಿಹ ಸಿಂಚನ ,
ಮೂಡಲಿ ಮರುದಿನ ಹೊಸವರ್ಷದ ಮೊದಲ ದಿನ ।।
ನವೀನಸೂರ್ತಿ
Utthamavage Mundhu vareyale nimma kavitheygalu varsha varshakuuu....
ReplyDelete