ನಮನ

by 03:34 0 comments

ನಮನ


ಮೈ ಕೊರೆವ ಚಳಿಯು ,
ಮನಕೆ ಮುದ್ದಿಡುವ ತಂಗಾಳಿಯು ,
ಉಸಿರು ಉಸಿರಿಗೂ ಜೀವ ತರುವ ಮಣ್ಣಿನ ಘಮವು ,
ಮಳೆ ಬಂದ ಕಾನನವ ಕಂಡು ಕುಣಿದಿರುವ ಮನವು ।।

ಚಳಿಯನ್ನು ಸೀಳುತ್ತಿರುವ ಎಳೆ ಬಿಸಿಲು ,
ಒಲವನ್ನು ಚಿಗುರಿಸುತ್ತಿರುವ ನೆನಪಿನ ಹೊನಲು ,
ಮೈ ತುಂಬಿ ತೂಗಾಡುತ್ತಿರುವ ಮರಗಿಡಗಳು ,
ಮನ ತುಂಬಿ ಓಲಾಡುತ್ತಿರುವ ಎಳೆ ಹೃದಯಗಳು ।।

ಬಾಳಿನ ಭಾವಗೀತೆಗೆ ರಾಗ ಸೇರಿಸುತ್ತಿವೆ ಅರಳಿದ ಸುಮಗಳು ,
ಅಮಲೇರಿಸುತ್ತಿದೆ ಸುಮಧುರ ಸುಮಗಳ ಘಮಲು ,
ಚದುರಿದ ಮೋಡಗಳ ಮಧ್ಯದಿಂದ ಉಷೆ ಧರೆಗಿಳಿದಳು ,
ಮಂಕಾದ ಮನಗಳ ಮೌನ ಒಡೆದಳು ।।

ತಂಗಾಳಿಯ ಒಲವಿನ ಹಾಡಿಗೆ ಕುಣಿದಿವೆ ಎಳೆಗಳು ,
ಕೊರಳಿನ ನಾದ ಸೇರಿಸುತ್ತಿವೆ ಗಿಳಿ ಕೋಗಿಲೆಗಳು ,
ಅಭಿಸಾರಿಣಿಯ ಅಭಿಮಾನಕ್ಕೆ ಕರಗಿದೆ ಕವಿಯ ಮನವು ,
ಕವಿಯ ಕವನಕ್ಕೆ ದನಿಗೂಡಿಸಿದ ಅಭಿಮಾನಿಯ ಒಲವಿನ ಶೃತಿಯು ।।

ದಿನಗಳ ಕಳೆಯುವ ಕಾಲದ ಆಟಕ್ಕೆ ,
ಸಿಲುಕಿ ಕಳೆದು ಹೋಗುತ್ತಿರುವ ಮನಗಳ ಓಟಕ್ಕೆ ,
ಮರಳಿ ಹುಡುಕಲು ಸಹಾಯ ಮಾಡಿರುವ ತಂಗಾಳಿಯ ತಂಪಿಗೆ ,
ಮಂಕನ್ನು ತೊಡೆದಿರುವ ಉಷೆಯ ಕಿರಣಕ್ಕೆ ,


ನವೀನಸ್ಫೂರ್ತಿಯ ನಲ್ಮೆಯ ನಮನ ।।

                                                        ನವೀನಸ್ಪೂರ್ತಿ 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment