ಯುಗದ ಆದಿ
ನಾ ಕಾಣದ್ದ , ಮಾವಿನ ಮರ ಕಂಡು ಚಿಗುರೈತೆ ನೋಡ,
ನೋಡ ನೋಡುತ್ತಲೇ ಹೊಂಗೆ ಹಲಸು ಮೈ ತುಂಬಿ ಹಾಡಿತ್ತು ಕಾಣ ,
ಈ ಪ್ರಕೃತಿಯ ಪ್ರತಿಕ್ರಿಯೆಗೆ ಅದಾವ ಮಹಾನುಭಾವ ಯುಗಾದಿ ಎಂದ, ಕೇಳಿ ನೋಡ ।।
ಅವನ ನೆನೆದು ಕಾಲ ಚಕ್ರಕ್ಕೆ ಮೈ ಒಗ್ಗಲಿ ಎಂದು,
ಎಣ್ಣೆ ಸ್ನಾನವ ನಾ ಮಾಡಿರುವೆ ,
ಸಾಗುವ ಹಾದಿಯ ಸುಖ ದುಃಖಗಳ ಸಮನಾಗಿ ಕಂಡು ,
ಬೇವು ಬೆಲ್ಲದ ಸವಿಯ ನಾ ಸವಿದಿರುವೆ ।।
ಎಳೆ ಮಂದಿಯೆಲ್ಲಾ ಹೊಸ ಬಟ್ಟೆ ತೊಟ್ಟಾರ,
ಹಳೆ ಮಂದಿಯಲ್ಲ ಹೋಳಿಗೆ ಊರಣ ತಟ್ಟಾರ ,
ಹಳೆ ಎಲೆಯಲ್ಲ ಉದುರಿ ಹೊಸ ಚಿಗುರು ಮೂಡ್ಯಾವ ,
ಮನೆ ಮನದಲ್ಲಿ ಹೊಸ ಹರುಷ ಕಂಡಾವ ।।
ಹಳೆಯ ಜಡವ ಎಣ್ಣೆಯಲ್ಲಿ ತೊಯ್ದು ,
ಹೊಸ ಅಂಗಿಯ ಹೊಸತನವ ತೊಟ್ಟು,
ಬಾಳಿನ ಹರುಷದ ಬೆಲ್ಲಕೆ ಶ್ರಮದ ಬೇವನ್ನು ತಿಂದು ,
ನೆಮ್ಮದಿಯ ಹೋಳಿಗೆಯಿಂದ ಬಾಳು ನಡೆಸುವಂತೆ ಸಾರುತ್ತಿದೆ...
ನಮ್ಮ ನಿಮ್ಮೆಲ್ಲೆರ ನೆಚ್ಚಿನ ಯುಗಾದಿ ||
ನವೀನಸ್ಫೂರ್ತಿ
0 comments:
Post a Comment