ಜೀವನವೆಂಬ ನಶೆ

by 02:54 2 comments

ನಶೆ 

ಎಲ್ಲಾ ನಶೆ ,ಎಲ್ಲೆಲ್ಲೂ ನಶೆ 
ದೇಹವೆಂಬ ಶೀಷೆಯ ತುಂಬಾ ನಶೆ ,
ನಾನು ಎಂಬ ನಶೆ , ನನ್ನದು ಎಂಬ ನಶೆ ।।

ಜೀವನದ ದಿಶೆ ಎನ್ನುವ ನಶೆ 
ಸಂಗಾತಿಯ ಸಂಗದ ನಶೆ 
ಹೊನ್ನು ಹೊಂದುವ ಹಿರಿದಾದ ನಶೆ ।।

ಎಲ್ಲಾ ನಶೆ , ಎಲ್ಲೆಲ್ಲೊ  ನಶೆ 
ದೇಹದ ಶೀಷೆ ತುಂಬಲಾರದ ನಶೆ ।।

ನೂರು ಇದ್ದರು ಮತ್ತೊಂದು ನನಗೇ ಇರಲಿ 
ಎಂಬ ಆಸೆಯ ನಶೆ ,
ಭೂಮಿಯೇ ತನ್ನದಾದರು ಮತ್ತಷ್ಟು ಬಯಸುವ 
ಮೋಹದ ನಶೆ ,
ಲೋಕವ ತ್ಯಜಿಸುವವರ ಬಳಿಯೂ ಲಾಭ ಬಯಸುವ 
ಲೋಭದ ನಶೆ ।।

ಎಲ್ಲವು ನಶೆ , ಎಲ್ಲರಲ್ಲೂ ನಶೆ 
ನಶೆ ಇಳಿದಾಗಲೆಲ್ಲ ನಶೆ ಏರಿಸಿಕೊಳ್ಳುವ ನಶೆ ।।

ತುಂಬದ ದೇಹದ ಶೀಷೆಗೆ
 ನಶೆ ಏರುವ ಶೀಷೆಯ ಏರಿಸುವ ನಶೆ ,
ಜೀವನದ ಉದ್ದಕ್ಕೂ ನಶೆಯಲ್ಲೆ  ಬದುಕುವ ನಶೆ ,
ನಶೆಯ ಶೀಷೆಯ, ನಶೆಯಲ್ಲೆ ಮುಳುಗಿಸುವ ನಶೆ ।।

                                                  ನವೀನ 


manvantarada-kavithegalu

Manvantarada Kavi

Kavana havyasa , coding dinakelasa

2 comments: