ಜನುಮದ ಧ್ಯೇಯವ ಹುಡುಕಲು ಹೊರಟ ನನಗೆ ಎದುರಾದ ಆಯ್ಕೆಗಳ , ಆಯ್ದ ಭಾವಗಳ ಸಂಕಲನವಿದು .
ಜನುಮದ ಧ್ಯೇಯ
ಜಗವೆಲ್ಲ ಮಲಗಿರಲು ಜಿಗಿದೆದ್ದಿತ್ತು ಮನ
ಜನುಮದ ಧ್ಯೇಯವನ್ನು ಹುಡುಕಲು ।।
ಹಲವರಂತೆ ಹೊನ್ನಿನ ಗಟ್ಟಿಯ ಒಯ್ಯಲೊ
ಕೆಲವರಂತೆ ಹೆಂಚಿನಡಿಯಲ್ಲಿ ಹಂಚಿ ತಿನ್ನಲೊ ।।
ಬದುಕಿನ ಅರ್ಥವನ್ನು ಹುಡುಕುವುದರಲ್ಲಿ ಕಳೆಯಲೊ
ಬದುಕಿಗೆ ಅರ್ಥ ನೀಡುವುದಕ್ಕೆ ಉಳಿಯಲೊ ।।
ದಿನದಿನದ ಜಂಜಾಟದಲ್ಲಿ ಬಾಳಲೊ
ನಿನ್ನೆ ನಾಳೆಯ ಅಲೆದಾಟದಲ್ಲಿ ಬದುಕಲೊ ।।
ಜೀವನ ರೂಪಿಸುವುದರಲ್ಲಿ ಯಶಸ್ವಿಯಾಗಲೊ
ಜೀವನ ಕಲ್ಪಿಸುವುದರಲ್ಲಿ ಯಶಸ್ಸು ಆಶಿಸಲೊ ।।
ದೇಹವ ನಡೆಸಲು ದೈನಂದಿನ ಕೆಲಸ ಮಾಡಲೊ
ದೈನಂದಿನ ಕೆಲಸಕ್ಕಾಗಿಯೇ ದೇಹವ ಮುಡಿಪಾಗಿಸಲೊ ।।
ಯಾವ ಧ್ಯೇಯವಿದ್ದರು ಜನುಮಕ್ಕೆ ಹಿರಿದಾದುದಲ್ಲ
ಧ್ಯೇಯದ ದಾರಿಯಲ್ಲಿ ಸಂತೋಷ ಹೊಂದುವುದು ಕಿರಿದಲ್ಲ ।।
ನವೀನ
0 comments:
Post a Comment