ಮಂಜಿನ ತೆರೆ

by 04:39 0 comments

ಮಂಜಿನ ತೆರೆ 



ಎತ್ತ ನೋಡಲು ಹಸಿರು , 
ಮೈನವಿರೇಳಿಸುವ ಚಳಿ ತರಿಸುವ ಉಸಿರು ,
ಹಸಿರ ಹೊದಿಕೆಯ ಸೀರೆಯಂತೆ ಉಟ್ಟು ।।

ಮದುವಣಗಿತ್ತಿಯಂತೆ ಸಿಂಗರಗೊಂಡಿರುವ ಹೆಣ್ಣು ,
ಮಂಜಿನ ಮುಸುಕನ್ನು ಹೊದ್ದು ಅಂದವ ಮರೆ ಮಾಚಿಸುತ್ತಿದೆ ಕಣ್ಣು ।।

ನವಿಲು ಕುಣಿತವ ಬಿಟ್ಟು ಕೋಗಿಲೆಯಾಗಿ ಕೂಗಿದೆ ,
ಹಕ್ಕಿಗಳ ಇಂಚರವು ನಾದದ ಓಲಗದಂತಿದೆ ।।

ಸೂರ್ಯನ ಕಿರಣದ ಒಡವೆಯು ಮಂಜಿನ ಮುಸುಕಲ್ಲಿ ಮರೆಯಾಗಿದೆ ,
ಇಬ್ಬನಿಯ ಹನಿಗಳು ತಾ ಮುಂದು ನಾ ಮುಂದು ಎಂದು ಮುತ್ತಿನ ಹರಳುಗಳಾಗಿವೆ।।

ಈ ಸುಂದರ ಬೆಡಗಿಯ ಮೊಗವ ಮುಸುಕು ತೆರೆದು ನೋಡಲು ಕಾದಿದೆ ಹೃದಯ ,
ಮಂಜಿನ ತೆರೆಯನ್ನು ತೆರೆಯಲಿ ಎಂದು ಕೇಳಿದೆ ಆ ಮೂಡಣದ ರವಿಯ ।।

ಈ ಸುಂದರ ಮದುವಣಗಿತ್ತಿಯೇ ಪ್ರಕೃತಿ ಎಂಬುವ ವಿಷಯ ,
ಇವಳ ಕಂಡಾಗ ಮಗುವಾಗುವುದು ಈ ನನ್ನ ಮುಗ್ದ ಹೃದಯ ।।


                                                      ನವೀನಸ್ಫೂರ್ತಿ 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment