ಕನ್ನಡ ಮಾತೆಗೆ ಒಂದು ನಮನ / ಕವನ

by 11:58 0 comments

ಕನ್ನಡ ಮಾತೆಗೆ ಒಂದು ನಮನ / ಕವನ 


ಆಶಯದ ಹಣತೆಯಲ್ಲಿ ..... 
ಕವಿದ ಕತ್ತಲೆಯನ್ನು ಕದಲಿಸುವ 
ಮಿನುಗುವ ಪ್ರೀತಿಯ ದೀಪದಲ್ಲಿ .... 

ಬರೆಯಲೆ ಒಂದು ಕವನ ???
ಕವನ ಎಂದರೆ ಕಡಿಮೆಯಾದೀತು, ಇದು ಒಂದು ನಮನ।। 

ಕಂಗಳಿತ್ತು, ಹೆತ್ತ ತಾಯಿಗೆ ,
ನೋಡುವ ಬೆಳಕಿಗೆ, ಅರಿವು ಮೂಡಿಸುವ ತಾಯಿಗೆ . 
ನಾಲಿಗೆಗೆ ಜೀವ ತುಂಬುವ, ದೇವಿಗೆ ,
ಹೃದಯಕ್ಕೆ ಭಾವ ತುಂಬುವ, ತಾಯಿಗೆ ,

ನಮನವಿರಲಿ, ಈ ಕವನದ, ಪುಟ್ಟ ನಮನವಿರಲಿ ।।

ಗಂಡುಗಲಿಗಳಿಗೆ ಜನ್ಮ ನೀಡಿದ ಮಾತೆ ,
ಕಾವೇರಿಯನಿತ್ತು ದಾಹ ತೀರಿಸುವ ಧಾತೆ ,

ಭವ್ಯತೆಗೆ ಇನ್ನೊಂದು ಹೆಸರೇ ನೀನು ।।

ನೀ ಕೊಟ್ಟ ಮಾತು, ಆಡಲು ನಾನು ,
 ಮನದಲ್ಲೇನೋ ಉಲ್ಲಾಸ 
ನಿನ್ನ ಮುತ್ತಿನ ನುಡಿಗಳಾಡಲು 
ಅದೆಂತದೋ ಗರ್ವ ।।

ಓ ನನ್ನ ಕನ್ನಡ ಮಾತೆ 
ನಮ್ಮೆಲ್ಲರ ಬಾಳಿಗೆ ಅನ್ನಧಾತೆ ,
ಬೇಡಲಿ ಇನ್ನೇನು ನಿನ್ನ ???

ನೀ ಕೊಟ್ಟದ್ದು , ಬಾಳಿಗೆ, ಭಾಗ್ಯಕ್ಕೆ , ಭಾವಕ್ಕೂ ತುಂಬಿ 
ಹಂಚಲು ಉಳಿದಿರುವಾಗ 
ನಾ ಕೇಳುವುದೊಂದೇ,  ಒಪ್ಪಿಸಿಕೋ
 ಈ ನನ್ನ ನಮನವ,
ಈ ನನ್ನ ಕವನವ......... ।।

                                                     ನವೀನಸ್ಫೂರ್ತಿ 


manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment