ನಿನ್ನ ಮನವೆಂಬ ಕೃತಿ

by 07:35 0 comments

ನಿನ್ನ ಮನವೆಂಬ ಕೃತಿ 


ಬಣ್ಣಿಸಲಿ ಹೊರಟಿಹೆ ಭಾವನೆಗಳ ಲಿಪಿಯ ,
ತೆರೆದಿಡಲು ಹೊರಟಿಹೆ ಮನದಾಳದ ಕೃತಿಯ ।।

ಈ ಲಿಪಿಯ ಮೂಲ ನೀನು ,ಈ ಕೃತಿಯ ಕರ್ತೃ ನೀನು ,
ನಿನ್ನೀ ಲಿಪಿಯ ,ನಿನ್ನದೇ ಕೃತಿಯ , ನಾ ಓದಬಲ್ಲೆನೇನು ।।

ಓದಬಹುದೆ ನಾನು , ನಿನ್ನಾ  ಕೃತಿಯ ಮನನ ಮಾಡಲೇನು 
ಮನದ ಭಾಷೆಯಲಿ ಮುದ್ರಿಸಬಹುದೆ ನಾನು ।।

ನಿನ್ನೀ ಕೃತಿಯ ಪ್ರತಿಯೊಂದು ಪುಟಕೆ ಪರವಶನಾಗಿಹೆ ನಾನು 
ನಿನ್ನ ಲಿಪಿಯ ಮೋಡಿಗೆ ಸೋತು ಕರಗಿ ಹೋಗಲೇನು ।।

ನಿನ್ನೀ ಕೃತಿಯಲ್ಲಿ , ನಿನ್ನದೇ ಲಿಪಿಯಲ್ಲಿ 
ನನ್ನ ಹೆಸರನ್ನು ಬರೆಯಬಹುದೆ ನಾನು ,

ನನಗಾಗಿ ನಿನ್ನ ಮನದಲ್ಲೊಂದು ಪುಟ, ಇನ್ನೂ ಉಳಿದಿಹುದೇನು ।।

                                     ನವೀನ 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment