ಸರಿ ತಪ್ಪಿನ ಸತ್ಯ
ಸರಿ ತಪ್ಪುಗಳ ಸಾವಿರ ತುಲನೆಯ ಜೀವನ ,
ಸವಿಯಿಂದ ಕಹಿಯನ್ನು ,ಕಹಿಯಿಂದ ಸವಿಯನ್ನು ,
ಸವಿಯುವುದರಲ್ಲೇ ಏಕೆ ಸವಿಸುವೀ ಜೀವನ ।।
ಬಾಳಿನ ನ್ಯಾಯದ ತಕ್ಕಡಿಯಲ್ಲಿ ,
ಸರಿ ತಪ್ಪುಗಳ ತೂಕ ಮಾಡಿ ,ತರ್ಕ ಮಾಡಿ ಬದುಕುವೆ ,
ನೀ ಸರಿಯೆಂದು ಕೊಂಡಿದ್ದಲ್ಲ ಸರಿಯೇ ,
ಎಂದು ಯಾವ ತಕ್ಕಡಿಯಲ್ಲಿಟ್ಟು ತೂಗುವೆ ,ಹೇಗೆ ನಂಬುವೆ ।।
ಪುಸ್ತಕದಲ್ಲಿ ಯಾರೋ ಸರಿಯೆನಿಸಿ ಬರೆದುದಾ ,
ಇದೇ ಸರಿಯೆಂದು ಹೇಳಿದ ಬೈಗುಳವಾ,
ಇಲ್ಲವೆ ಎಲ್ಲರೂ ಸರಿಯೆಂದು ಒಪ್ಪುವ ವಾದವಾ ,
ಸರಿ ತಪ್ಪುಗಳ ಸಂಕಲನದ ಸ್ವಾಮ್ಯವಾ ।।
ಸರಿ ತಪ್ಪು ಎಂಬ ಎರಡೇ ಕಣ್ಣಲ್ಲಿ ನೋಡುವುದು ,
ಹುಟ್ಟು ಸಾವು ಎಂಬ ಎರಡೇ ದಿನದಲ್ಲಿ ಬಾಳಿದಂತೆ ,
ಸರಿ ತಪ್ಪಿನ ತೆಪ್ಪದ ಪಯಣದಲ್ಲಿ ಸರಿಯೂ ತಪ್ಪೆ ,
ತಪ್ಪೂ ಸರಿಯೆ ,ಇದರಿಂದಾದ ಹುಟ್ಟಿಂದ ,
ಹುಟ್ಟು ಹಾಕುತ್ತಾ ಜೀವನದ ನದಿಯ ದಾಟುವುದೇ ಸತ್ಯ ......
ನವೀನ
0 comments:
Post a Comment