ಬಣ್ಣದ ಲೇಖನಿಯ ಹುಡುಗ
ಬೆರಗು ಕಣ್ಣಲ್ಲಿ ಬಣ್ಣದ ಜಗತ್ತನ್ನು ನೋಡುತಾ,
ಬಣ್ಣ ಬಣ್ಣದ ಲೆಖನಿಗಳ ಕೈಯಲ್ಲಿ ಹಿಡಿದು ಮಾರುತಾ,
ಕೊರಳಿಗೆ ಕಾರ್ಡು ಧರಿಸಿ ಠೀವಿ ಯಿಂದ ನಡೆಯುವವರ ಬಳಿ ಒಡುತಾ,
ನನ್ನ ಮಾತು ಕೀಳೆಂದು ಮೂಕವಾಗಿ ತೋರಿಸಿ ಹೇಳುತಿದ್ದ ।।
ತೆಗೆದುಕೊಳ್ಳಿ ಈ ಲೇಖನಿಯನ್ನು, ನನ್ನ ಈ ಹೊತ್ತಿನ ಹೊಟ್ಟೆ ತುಂಬಿಸಿ,
ನನ್ನ ಕೂರಿಸಿ,ಓದಿಸಿ, ಊಟ ಹಾಕು ವವರಾರು ಇಲ್ಲ,
ನನ್ನ ಕೊಳಕು ಬಟ್ಟೆ ಬದಲಿಸಲು, ಬೇರೆ ಬಟ್ಟೆಯಿಲ್ಲ,
ಹಾಗೆಂದು ನಾ ಭಿಕ್ಷೆ ಬೇಡುವುದಿಲ್ಲ,ನಾನು ಸ್ವಾಭಿಮಾನಿ ।।
ಅವನ ಕಂಗಳ ಈ ಮೂಕ ಮಾತನ್ನು ಯಾರೂ ನೋಡುತಿಲ್ಲ,
ಕೀಲಿಮಣೆ ಯಲ್ಲಿ ಕುಟ್ಟುವ ಇವರಿಗೆ ಲೇಖನಿ ಬೇಡೆಂದು ಇವನಿಗೆ ತಿಳಿದಿಲ್ಲ,
ಆದರೂ ಅವರಲ್ಲಿ ತನ್ನನ್ನು ಕಾಣುವ ಇವನು,
ಒಂದಿಲ್ಲೊಂದು ದಿನ ನಾನು ಹೀಗೆ ನಡೆದುಬರುವೆ ಎಂಬ ಆಶಯ ।।
ಈ ಅನವರತ ಆಶಯ ಫಲಿಸಲಿ,
ಅವನ ಬಣ್ಣ ಬಣ್ಣದ ಲೇಖನಿಗಳು,
ಅವನ ಬಾಳನ್ನು ಬಣ್ಣ ತುಂಬಿ ಬರೆಯಲಿ,
ಅವನ ಕಣ್ಣಿನ ಭಾಷೆಯು ಕಾರ್ಡು ಧರಿಸುವವರಿಗೆ ಅರ್ಥವಾಗಲಿ ।।
ನವೀನ
0 comments:
Post a Comment