ಸಿಹಿಯಾದ ಕಡಲು

by 00:29 0 comments

ಸಿಹಿಯಾದ ಕಡಲು 


ಸಿಹಿಯಾದ ಸೊಗಸಿಗೆ ಸವಿಯೊಂದು ಸಿಗಲು 
ಸಿಗ್ಗಾದ ಮನಸಿಗೆ ಸಿಕ್ಕಿತ್ತು ಮುಗಿಲು ।।

ಬರಡು ಬಯಲಲ್ಲಿ ನಿನ್ನ ನಗೆಯ ಮಳೆ ಹನಿಯಲು 
ಬರಿದಾದ ಮನಸ್ಸು ತುಂಬಾ ಹಸಿರಾಯ್ತು ಪ್ರೀತಿಯ ಹೊನಲು ।।

ಎದೆಯಿಂದ ಬಂದ ಬಳುವಳಿಯ ಕೊಡಲು 
ಕಾತರಿಸಿತ್ತು  ಕಣ್ಣಲ್ಲೇ ಕಳವಳದ ಕಡಲು ।।

ಕಡಲ ಕಣ್ಮುಚ್ಚದೆ ದಾಟಿ ನಿನ್ನಲ್ಲಿಗೆ ಬರಲು 
ಬಿಚ್ಚಿಟ್ಟಿದೆ ನಾ ತಂದ ಕಾಣಿಕೆಯ ಕೊರಳು ।।

ನನ್ನ ಕೊರಳ ಧ್ವನಿಯು ಪ್ರತಿಧ್ವನಿಸುವ ಮೊದಲು 
ನಿನ್ನ ದನಿಯು ತಿರಸ್ಕರಿಸಿತ್ತು ನನ್ನ ಒಲವಿನ ಒಡಲು ।।

ನನ್ನ ಸಿಹಿಯಾದ ಉಡುಗೊರೆಯ ಬದಲು 
ದೊರಕಿತ್ತು ನನಗೆ ನೋವಿನ ಕಡಲು ।।

ಅಳುಕಿದೆ ದಾಟಲು ಈ ನೋವಿನ ಕಡಲು 
ಯಾರಲ್ಲಿ ಹೇಳಲಿ ನನ್ನ ಈ ಅಳಲು ।।

                                                  ನವೀನ  

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment