ಸೃಷ್ಟಿ ಸಂಗೀತ
ಆನಂದದ ಆಲಾಪವ ಶುರುಮಾಡಿದೆ
ತಂಗಾಳಿಯು , ತಂಪೆರಚುವ ಈ ಸಂಜೆಗೆ ।।
ಗುಡುಗು ಢಮರ ಬಾರಿಸುತೆ , ಮಳೆಹನಿಯ
ಮೇಲಿಂದ ಚೆಲ್ಲಿ ಝೆಂಕಾರವ ಜೋಡಿಸಿದೆ ।।
ಝೆಂಕಾರದ ಈ ಪಲ್ಲವಿಗೆ ಏಕ ನಾದವ
ಹಿಡಿದಿದೆ ಜೀರು ಧುಂಬಿಯು ।।
ಧುಂಬಿಯ ರಾಗಕೆ ದನಿಗೂಡಿಸಿ
ಮಿಡಿಯಲು ಆ ಮಿಡತೆಯು ।।
ಮಿಡಿಯುವ ರಾಗಕೆ ಸ್ವರಗಳ ಸೇರಿಸಿದೆ
ಸರಿದಾಡುವ ಸರೀ ಸೃಪವು ।।
ಸ್ವರಗಳ ಪಲ್ಲವಿಗೆ ಚರಣವ ಶುರುಮಾಡಿದೆ
ಮಾವಿನ ಮರದ ಆ ಗಿಳಿಯು ।।
ಗಿಳಿಯ ಚರಣವ ಕೇಳಿ , ಕೊರಳ ಭಾವವ
ಬೆಸೆದು ಕೂಗಿದೆ ಈ ಕೋಗಿಲೆಯು ।।
ಕೋಗಿಲೆಯ ಕಂಠಕ್ಕೆ, ಕಲರವದ ನಾದವ
ನುಡಿಸಿದೆ ಹರಿಯುತ್ತಿರುವ ಆ ನದಿಯು ।।
ನದಿಯ ಜುಳು ಜುಳು ನಾದಕ್ಕೆ ,
ರಾಗ ವೀಣೆಯ ಮೀಟಿದೆ ಬಳುಕುತ್ತಾ ಬೀಳುತ್ತಿರುವ ಜಲಪಾತವು ।।
ಈ ರಮಣೀಯ ರಂಗೇರಿದ ಸಂಗೀತ ಸಂಜೆಗೆ
ನಾನು ಅತಿಥಿಯಾಗಿ ಬಂದಿರುವೆನು ।।
ಸೃಷ್ಟಿಯ ಅತ್ಯಧ್ಬುತ ಅನುಭವವ ಕಂಡು
ಮೂಕವಿಸ್ಮಿತನಾಗಿ ನಿಂತಿರುವೆನು ।।
ನವೀನ
Mavina rasadaste channagedi ��
ReplyDelete