ಮನಗಳ ಮರ್ಧನ
ಕೊಡಲಾರೆ ಕಣ್ಣೀರ ಧಾರೆ ,
ಕನಸಲ್ಲೂ ನೋಯಿಸದ ಮನಕೀಗ ,
ಹೊರಿಸಲಾರೆ ನೋವಿನ ಹೊರೆ ,
ಸಣ್ಣ ನೋವನ್ನೂ ನೀಡದ ಮನಕೀಗ ।।
ಭಾವನೆಗಳ ಕನ್ನಡಿ ಹೊಡೆದು ಚೂರಾಗಿದೆ ,
ಭವ್ಯ ಬಂಗಲೆಯ ಆಸರೆ ಸಿಗದೆ ,
ಕನಸುಗಳು ಹರಿದು ನೂರಾಗಿದೆ ,
ರೂಪಾಯಿಯ ಗದ್ದುಗೆ ಇಲ್ಲದೆ ।।
ಶುದ್ಧ ಹಾಲಿನಂತ ಪ್ರೇಮವು ,ಬೆಂದು ನಲುಗಿದೆ ,
ಭಯದ ಬೆಂಕಿಯ ಕೆನ್ನಾಲಿಗೆಯಲ್ಲಿ ,
ಪ್ರೀತಿಯ ಹಕ್ಕಿಯ ಗೂಡು , ಹೊತ್ತಿ ಉರಿದಿದೆ ,
ಅಂತಸ್ತಿನ ಆರ್ತನಾದದ ಮಳೆಯಲ್ಲಿ ।।
ಸಮಾಜದ ಕಟ್ಟುಪಾಡುಗಳ ಕಟ್ಟಡದಲ್ಲಿ ,
ಪ್ರೀತಿಯ ಇಟ್ಟಿಗೆಯ ಬೆಲೆಯು ತೃಣವಾಗಿದೆ ,
ಐಶ್ವರ್ಯದ ಅಂಜಿಕೆಯ ಜಗದಲ್ಲಿ ,
ಪ್ರೀತಿಯ ಅಶ್ವ ಹೆದರಿ ಮೂಲೆಗುಂಪಾಗಿದೆ ।।
ಮನದ ಮಧುರ ಮೈತ್ರಿಯ,
ಮಾನವನ ಕುರುಡು ಸಮಾಜ ,
ಕುರುಡು ಪ್ರೀತಿಯೆಂದು ಕಿತ್ತು ಹಾಕಿದೆ ।।
ಸಮಾಜದ ಕ್ರೌರ್ಯವಾದ ಜ್ವಾಲಾಮುಖಿಯು
ಮಧುರವಾದ ಮನಗಳ ಮರ್ಧನ ಮಾಡಿದೆ ।।
ನವೀನಸ್ಪೂರ್ತಿ
0 comments:
Post a Comment