ಕನ್ನಡ ಮಾತೆ
ಕಾವ್ಯಮಯವಾದ ಕಂಗಳು ,
ಕನ್ನಡಮ್ಮನ ಕರುಣೆಯ ಒಡಲು,
ಚೆಲ್ಲಿ ಸೂಸಿದೆ ಪ್ರೇಮದ ಬೆಳದಿಂಗಳು ,
ಮಿಂದು ಧನ್ಯನಾಗು, ಕರುನಾಡು ಸ್ವರ್ಗದ ಸೀಳು ।।
ಸವಿಯಲು ಸಕ್ಕರೆ ,ಕನ್ನಡಮ್ಮನ ಅಕ್ಕರೆ ,
ಬಾಯಿಗೆ ಕೊಟ್ಟಳು , ಕನ್ನಡವೆಂಬ ಕಲ್ಲು ಸಕ್ಕರೆ ,
ಕರವ ನೀಡಿ ಮತ್ತಷ್ಟು ಬೇಡುತಿರುವೆ ,
ನಿನ್ನಯ ಒಲವಿನ ಈ ಅಕ್ಕರೆ ।।
ಕಾಣದೂರಿನಿಂದ ನಿನ್ನೊಡಲಿಗೆ ಬಂದಿರುವೆ ,
ಹೆತ್ತ ತಾಯಿಯಂತೆ ನನ್ನನೂ ಹರಸಿರುವೆ ,
ನಿನ್ನ ಅಕ್ಕರೆಯ ತುತ್ತಿಗೆ , ನಿನ್ನ ಪ್ರೀತಿಯ ಮುತ್ತಿಗೆ ,
ಜೀವನ ವಿರುವ ತರದಿ ನಿನ್ನಾ ಆರಾಧಿಸುವೆ ।।
ಕರುನಾಡ ಅಧಿದೇವತೆ , ಹರಿಶಿನ ಕುಂಕುಮ ಅಲಂಕೃತೆ ,
ಕದಂಬರು ಕಟ್ಟಿದ ನಾಡ ಮಾತೆ ,
ಪಂಚ ಕೋಟಿ ಕನ್ನಡಿಗರ ಶಕ್ತಿದಾತೆ ,
ಈ ಕವನ ನಿನ್ನ ಪಾದಕಮಲಗಳಿಗೆ ಅರ್ಪಿತೆ ।।
ನವೀನಸ್ಪೂರ್ತಿ
0 comments:
Post a Comment