ಉಪಮೇಯವೇನು ನಿನಗೆ
ಸೌಂದರ್ಯದ ಗಣಿಯಾದೆ,
ಸಂತೋಷದ ಖಣಿಯಾದೆ ,
ವಾತ್ಸಲ್ಯದ ಮಡುವಾದೆ ,
ಪ್ರೇಮದ ಪರ್ವತವಾದೆ ।।
ಎದೆಯೊಳಗೆ ನೂರು ನೋವು,
ತುಟಿಯ ಮೇಲೆ ನಗೆಯ ಹೂವು,
ಭಾವಗಳ ಬಯಕೆ ನೂರು ,
ಬಯಸುವುದು ಆದರದ ಚೂರು ।।
ಗಟ್ಟಿತನದ ಮಾತಿನಲ್ಲಿ ಜೋರು ಮಾಡುವೆ,
ಹತಾಶೆಯ ನೀರ ಕಣ್ಣಿನಲ್ಲಿ ಸುರಿಸುವೆ ,
ಮನದ ಜ್ವಾಲಾಮುಖಿಯಲ್ಲಿ ಸುಡುವ ಬೆಂಕಿ ಇದ್ದರೂ,
ನಗುವ ಭೂಮಿಯಂತೆ
ಪ್ರಶಾಂತವಾಗಿರುವ ನಿನಗೆ ಉಪಮೇಯವೇನು ?
ಹೆಣ್ಣು ಎನ್ನಲು ಅತಿಶಯೋಕ್ತಿ ಏನು ??
ನವೀನಸ್ಪೂರ್ತಿ
0 comments:
Post a Comment