ಸೊಬಗ ಸಿರಿ

by 10:16 0 comments

 ಸೊಬಗ ಸಿರಿ 


ಹೆಜ್ಜೆಗೆ ಗೆಜ್ಜೆಯಾದೆ ,
ಜೀವಕೆ ಜೊತೆಯಾದೆ ,
ಕನಸಿಗೆ ಆಸರೆಯಾದೆ ,
ಒಲವನ್ನೇ  ಉಡುಗೊರೆಯಾಗಿ  ನೀಡಿದೆ ।।

ಮುಡಿಗೆ ಹೂವಾದೆ ,
ತುಟಿಗೆ ನಗೆಯಾದೆ ,
 ಕಣ್ಣಿಗೆ ಮಿಂಚಾದೆ ,
ಹಣೆಗೆ ಕುಕುಮವಾಗುವೆಯಾ ಎಂದು ಕಾದೆ ।।

ಸ್ವರಕೆ ಸಂಗೀತವಾದೆ ,
 ಶಬ್ದಕ್ಕೆ  ಕೋಶವಾದೆ ,
ಕವನಕ್ಕೆ ಮೂಲವಾದೆ ,
ಮನ್ವಂತರದ ಮನಕೆ ನೆಲೆ ಕೊಟ್ಟ ಕವಿಯಾದೆ ।।

                                               ನವೀನಸ್ಪೂರ್ತಿ

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment