ಹುಡುಕಾಟ
ಹುಡುಕುತಿರುವೆ ನನ್ನೆ ನಾನು...
ಬೀಳೋ ಮಳೆಯಲ್ಲಿ
ಬೀಸೋ ಗಾಳಿಯಲ್ಲಿ ..
ಇರುವ ವಾತಾವರಣದಲ್ಲಿ
ಬರುವ ಭಾವನೆಗಳಲ್ಲಿ ...
ಹುಡುಕುತಿರುವೆ ನನ್ನೆ ನಾ !! ಕಳೆದುಹೋದ ನನ್ನ ,
ಹುಡುಕುತಿರುವೆ ನನ್ನೆ ನಾನು
ಮಿಂಚೋ ಮಿಂಚಲ್ಲಿ ,
ಗುಡುಗೋ ಗುಡುಗಲ್ಲಿ ..
ಮಣ್ಣ ವಾಸನೆಯಲ್ಲಿ ,
ನನ್ನ ಮನಸಲ್ಲಿ ...
ಹುಡುಕುತ್ತಲೇ ಹೋಗುತ್ತಿರುವೆ ನಾ ,
ಕಳೆಗುಂದದ ಆ ನನ್ನ !
ಎಲ್ಲಿ ಹುಡುಕಲಿ ನನ್ನೇ ನಾ?
ಎಲ್ಲಿ ನೋಡಲಿ ನನ್ನೇ ನಾ ?
ಅರಿಯದೆ ಅರಸುತಿರುವೆನು
ತಿಳಿಯದೆ ಕೊರಗುತಿರುವೆನು ..
ಸಿಗುವೆನೆ ನಾನು ನಾನಾಗಿ ,
ಮತ್ತೆ ಬರುವೆನೆ ತಾನಾಗಿ ,
ಮರುಕಳಿಸಿ ಮೊದಲಾಗಿ
ನನ್ನ ನೆನಪಿನಂಗಳದ ಒಲವಾಗಿ !?
ಸ್ಪೂರ್ತಿ
0 comments:
Post a Comment