ನಸುಕಿನ ನೆನಪು

by 00:15 0 comments

ನಸುಕಿನ ನೆನಪು 



ನಸುಕಿನ ನಡುಗುವ ಚಳಿ,
ಹೊದ್ದಿರುವ ಮೈಯನ್ನು ನಡುಗಿಸಿ. 
ಮಲಗಿದ್ದ ಮೌನದ ಮನಸ,
ಕಚಗುಳಿ ಕೊಟ್ಟು ಎಬ್ಬಿಸಿ ।।

ಕನಸಲ್ಲಿ ಮೂಡಬೇಕಿದ್ದ ಚಿತ್ರಗಳ ,
ಕಣ್ಣೆದುರೇ ಮೂಡಿಸಿ ಹರಿಸಿದೆ
ಮೂಡಿದ್ದ ಚಿತ್ರಗಳ ನೆನಪುಗಳ ರಂಗು 
ಮುಂಜಾನೆಯ ಮಂಜಲ್ಲಿ ಕಲೆತಿದೆ ।।

ಮಂಜಿನ ಹನಿಹನಿಯೊಂದು ,
ಮುಂಜಾನೆಯ ಮಸುಕಲ್ಲಿ ,
ಮನದಾಳದ ಮೌನದ ನೆನಪುಗಳ 
ಮಸುಕು ಮಸುಕಾಗಿ ಮೂಡಿಸಿದೆ ।।

ಈ ಮಸುಕಿನ ನೆನಪಿನ ಚಿತ್ರವು 
ತರದೆ ನಿದ್ದೆ ,ಕಣ್ಣ ಕೊರೆದಿದೆ. 
ತನ್ನ ನೆನಪಿನ ನಾಯಕಿಯ,
ನೆನೆಯೆಂದು ಕರೆ ನೀಡಿದೆ ।।

                                    -ನವೀನಸ್ಪೂರ್ತಿ 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment