ಸುಪ್ರಭಾತ

by 05:01 0 comments

ಸುಪ್ರಭಾತ 


ಹೊಸ ಹುರುಪಿರಲಿ ಇಂದಿನ ಜೀವನಕ್ಕೆ ,
ಹಳೆಯ ನೆನಪುಗಳು ಹಾಸಿಗೆಯಲ್ಲಿ ,
ಮುಂದಿನ ಕನಸುಗಳು ಹೊದಿಕೆಯಾಗಲಿ ,
ಭರವಸೆಯೇ ತಲೆ ದಿಂಬಾಗಲಿ ।।

ಹಾಯಾಗಿ ನಿದ್ರಿಸು ಗೆಳತಿ ಜೀವಕ್ಕೆ ಜ್ವರ ಬಡಿಯಲು ,
ನಿಂತು ಎದಿರಿಸು ಗೆಳತಿ ಭಾವನೆಗಳ ಗರ ಹೊಡೆಯಲು ,
ಚಿಂತೆಯ ಚಿತೆಗೆ ಕನಸಿನ ಮಳೆಗರಿಸು ,
ಕಣ್ಣೇರಿನ ಕಥೆಗೆ ನಗುವಿನ ಅಂಕಿತ ಇರಿಸು ।।

ಬೇಯಿಸುವ ಭಾವನೆಗಳ ನಿನಗೆ ಮಂಕು ತರಿಸಿವೆ,
ನೆನಪುಗಳ ಕನಸುಗಳು ನಿನ್ನ ಮನಸ ಕೆಡಿಸಿವೆ ,
ಮನದ ಯೋಚನೆಗಳು ನೆಮ್ಮದಿಯ ನಿದ್ದೆ ಕೆಡಿಸಿವೆ ,
ಆಲಿಸಿದ ಮಾತುಗಳು ಆಕಳಿಕೆಯಲ್ಲೂ ಕಣ್ಣೀರು ತರಿಸುವೆ ।।

ಎಲ್ಲ ನೆನಪುಗಳ ಸುಂದರ ಕನಸಾಗಿ ಮಾಡಿ ,
ಹೊಸ ಜೀವನದ ದಿನಕ್ಕೆ ಎದ್ದು ,
ಸುಪ್ರಭಾತ ಹಾಡು ಗೆಳತಿ ,
ಸುಪ್ರಭಾತ ಹಾಡು........ ।।

                                                    ನವೀನಸ್ಪೂರ್ತಿ 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment