ಅಮ್ಮಾ
ಈ ಬಾಳನ್ನು ಬಳ್ಳಿಯಿಂದ ತಂದೆ ನೀನು ,
ನಿನ್ನ ದೇಹದ ಭಾಗವಾಗಿದ್ದೆ ನಾನು ,
ನನ್ನ ಹುಟ್ಟಿಗಾಗಿ ಮರು ಹುಟ್ಟು ಪಡೆದೆ ನೀನು ,
ನಿನ್ನ ಪುಟ್ಟ ಕಂದಮ್ಮ ನಾನು ।।
ನಿನ್ನ ಎದೆಯ ಅಮೃತವ ಬಸಿದು ಬೆಳೆಸಿದೆ ನನ್ನ ,
ನನ್ನೆದೆಯ ಗೂಡಲ್ಲಿ ಮೂಡಿದ್ದ ಮೊದಲ ಅಕ್ಷರವೇ ಅಮ್ಮ....
ನೀ ತಂದ ಕೈ ತುತ್ತು ನನ್ನ ಬೆಳೆಸಿತ್ತು ,
ನೀ ಇಟ್ಟ ಮುತ್ತು ನನ್ನ ಹರಸಿತ್ತು ।।
ನಾ ಇಡುವ ಹೆಜ್ಜೆಗೆ ನಿನ್ನದೇ ಬೆಂಬಲ ,
ನಾ ಮಾಡುವ ರಜ್ಜೆಗೆ ನಿನ್ನದೇ ಹಂಬಲ ,
ಜಗವ ತೋರಿದವಳು ನೀನೇ ,
ನನ್ನ ಜಗವೆಲ್ಲ ನೀನೆ ।।
ಕಾಣೆನು ನಾ ಕಲ್ಮಷ ನಿನ್ನ ಪ್ರೀತಿಯಲ್ಲಿ ,
ತಾಳೆನು ನಾ ಯಾವ ನಿಮಿಷ ಇರದೆ ನಿನ್ನ ಪ್ರೇಮದಲ್ಲಿ ,
ಬಿದ್ದರೆ ನನ್ನ ತಪ್ಪು ನೋಡುವ ತಂದೆ ,
ಸರಿ ತೂಗರು ನಿನ್ನ ಅಪ್ಪುಗೆಯ ಮುಂದೆ ।।
ಇಷ್ಟೆಲ್ಲಾ ತಂದ ನಿನ್ನ ಪ್ರೀತಿಯು ಎಲ್ಲಕ್ಕಿಂತ ಮಿಗಿಲು ,
ನಿನ್ನ ಈ ಪರ್ವತದ ಪ್ರೀತಿಯ ,
ನನ್ನ ಪ್ರೀತಿಯ ತಕ್ಕಡಿಯಲ್ಲಿ ನಾ ಹೇಗೆ ತೂಗಲಿ ,
ಪ್ರೀತಿಯ ಪ್ರತ್ಯಕ್ಷ ರೂಪವೇ ನೀನು .....
........ ಅಮ್ಮಾ .......
0 comments:
Post a Comment