ಕರುನಾಡ ಹೆಮ್ಮೆಯ ಕಂದ
ಏನೋ ಕನ್ನಡದ ತಮ್ಮ .. ... .... .....
ನಿನ್ನ ಭಾಷೆ ಮಾತಾಡಲು ನಿನಗೇ ಅಳುಕೇಕಮ್ಮ
ಊರಿಂದ ಊರಿಗೆ ಬಂದರೂ ,
ಭಾಷೆ ಬಿಡದ ಜನರ ನಡುವೆ
ನೂರು ಭಾಷೆ ಕಲಿಯುವ ಕರ್ಮ ನಿನಗೇಕಮ್ಮ ।।
ಕಳಿಸು ನಿನ್ನ ಊರ ನಲ್ಮೆಯ ಭಾಷೆಯ
ಊರಿಂದೂರಿಗೆ ಬಂದಿರುವ ನೂರು ಮಂದಿಗೂ ,
ಈ ನಾಡಲ್ಲಿ ಉಳಿವ ಎಲ್ಲ ಮಂದಿಗೂ
ತಿಳಿಸು ನಿನ್ನ ನಾಡ ಹಿರಿಮೆಯ ।।
ಗಂಧದ ಸುಗಂಧವ ತೋರಿಸು
ಕಾವೇರಿಯ ತಂಪಲ್ಲಿ ತೇಲಿಸು
ಸಹ್ಯಾದ್ರಿಯ ಸಿಂಚನವ ಮಾಡಿಸು ,
ಸುಮಧುರ ಕಸ್ತೂರಿ ಕನ್ನಡವ ಕಲಿಸು , ನಲಿಸು ।।
"ಕನ್ನಡ್ ಗೊತ್ತಿಲ್ಲ" ಅಂದೋರಿಗೆ
ಕನ್ನಡದ ಸೌಂದರ್ಯವ ಕನ್ನಡಿ ಹಿಡಿದು ತೋರಿಸು .
ಗೊತ್ತಿದ್ದರೂ ಮಾತಾಡದ ಮೂಢರಿಗೆ
"ಗಾಂಚಲಿ ಬಿಡಿ ಕನ್ನಡ ಮಾತಾಡಿ" ಎಂದು ಹೇಳು ।।
ಕೆಚ್ಚದೆಯಿಂದ ಸಾರಿ ಹೇಳು
"ನಾ ಕನ್ನಡಿಗ" ನೆಂದು
ಗರ್ವದಿಂದ ಕೂಗಿ ಹೇಳು
"ಕಾವೇರಿ" ನಮ್ಮವಳೆಂದು ।।
ನವೀನಸ್ಫೂರ್ತಿ
0 comments:
Post a Comment