Startup ಪಯಣ

by 04:59 0 comments

Startup ಪಯಣ 



Startup ಅಂದ್ರೆ ನಮ್ಮ ಕಣ್ಣು ಮುಂದೆ ಬರೋದು ರಾತ್ರೋ ರಾತ್ರಿ Famous ಆಗೋ Company ಗಳು. 

ಇದ್ದಕ್ಕಿದ್ದ ಹಾಗೆ ಖ್ಯಾತಿ ಗಳಿಸಿ ದೇಶಾದ್ಯಂತ ಹೆಸರು ಮಾಡಿ ಎಳೆ ವಯಸ್ಸಿನಲ್ಲೇ ಶ್ರೀಮಂತರಾದ Founders ಗಳು . 

ಇಷ್ಟೆಲ್ಲ Hyped , Cool Startups ನ ಪಯಣದ ಹಿಂದಿರೊ ನೈಜ ಪಯಣನ ವರ್ಣಿಸೋದೆ ಈ ಕವನದ ಉದ್ದೇಶ . 


ಈ ಸ್ವಪ್ನದಂಗಳದಲ್ಲಿ ,ಅಸ್ಪಷ್ಟತೆಯ ಅಂಧಕಾರದ ಮಡಿಲಲ್ಲಿ 
ಆಶಯದ ಬೆಳದಿಂಗಳ ದಾರಿಯಲ್ಲಿ 
ಭಾವನೆಗಳ ತರು ಲತೆಗಳಿಗೆ ಬೆವರು ನೀರನ್ನು ಚೆಲ್ಲಿ ,
ಸಾಗಿದೆ ಬಾಳಿನ ಚಕ್ರ , ಕಾಣದ ಕಾಡ ಹಾದಿಯಲ್ಲಿ ।।

 ಆಗ್ಗಾಗ್ಗೆ ಸಿಗುವ ಸೀಳು ದಾರಿಯ ಸೀಳಿ ,
ತಂದ ಬುತ್ತಿಯು ಮುಗಿಯುವ ಮುನ್ನ ಬೆಳಕ ಕಾಣುವ ಆಸೆಯಲ್ಲಿ ,
ಬುತ್ತಿ ಮುಗಿದರೆ ಇಲ್ಲ ಚಕ್ರ ಮುರಿದರೆ ಎನ್ನುವ ಭಯದಲ್ಲಿ ,
ಕಾಣದ ಈ ದಾರಿಯಲ್ಲಿ ಮನದ ಮಹದಾಶಯ ಒಂದೆ ದಿಕ್ಸೂಚಿಯಿಲ್ಲಿ ।।

ಬೆಳಕ ಕಾಣುವ ಬರದಲ್ಲಿ , ಸಾಗಿದೆ ಜೀವನ ಚಕ್ರ ,
ನೀನೆ ಶುರುಮಾಡಿದ ನಿನ್ನ ಚಕ್ರ ।।

ಚಕ್ರ ಹಿಡಿದು ಬಂದಿರುವೆ ನೀನು ,
ದಾರಿ ಕ್ರಮಿಸಲು ಬೇಕಾದ ಗಾಡಿ ಕಟ್ಟಲು ನಿಂತಿರುವೆ ನೀನು ,
ಕಟ್ಟುವ ಕುಶಲ ಕರ್ಮಿಗಳ ಹೆಕ್ಕಿ ತರಲೇ ಬೇಕು ನೀನು ,
ಕಟ್ಟಿ ನಡೆಸಲು ಜೀವನ ಬಂಡಿಯ ನೀನು ।।

ಈ ಬಂಡಿಯ ನಡೆಸುವ ನಾವಿಕ ನೀನು ,
ಕಟ್ಟಲು ಸಹಾಯ ಮಾಡಿದವರ ಕರೆದೊಯ್ಯಲೇ ಬೇಕು ನೀನು ,
ಬಂಡಿಯಲ್ಲಿ ಬಂದವರಿಗೆಲ್ಲ ನಿನ್ನ ಬುತ್ತಿಯ ಹಂಚಲೇಬೇಕು ನೀನು ,
ಬುತ್ತಿ ಕಾಲಿಯಾಗುವ ಮುನ್ನ ಬುತ್ತಿಯುಳ್ಳವರ ಗಾಡಿಗೆ ಹತ್ತಿಸಿಕೊಳ್ಳಲೇಬೇಕು ನೀನು.  ।।

                                      ನವೀನಸ್ಫೂರ್ತಿ
 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment