ಅಂಜಿಕೆಯ ಸಂಚಿಕೆ

by 03:18 0 comments
ಅಂಜಿಕೆಯ ಸಂಚಿಕೆ 

ಎ ಅಂಜಿಕೆ ನೀನೇಕೆ ಬಂದೆ ಓದುವಾಗ ,
ನನ್ನ ಮನದಲ್ಲಿ ಮುಚ್ಚಿಟ್ಟಿದ್ದ ಸಂಚಿಕೆ ,
ಎದೆ ಬಡಿತ ಹೆಚ್ಚಿಸಿದೆ , ಮಾತು ತಪ್ಪಿಸಿದೆ ,
ಪಿಸುಗುಡುತ್ತಾ ಬಂದ ಮಾತನ್ನು ಮುಗುಳ್ನಗೆಯಲ್ಲಿ ಮರೆಸಿದೆ ।।

ಈ ಮನದ ಸಂಚಿಕೆ ಬಹುದಿನದ ಮೌನದ ಅರಿಕೆ ,
ಇರಲಾರದೆ ನಿನ್ನ ಮೇಲೆ ನಿನಗೆ ನಂಬಿಕೆ ,
ಗಲಿಬಿಲಿ ಗೊಳಿಸಿ ಬಂಧಿಸಿದೆ , ಬಿಚ್ಚಿಡುತ್ತಿದ್ದ ಮನದ ಬಯಕೆ ,
ಎ ಅಂಜಿಕೆ ಬಂದೇಕೆ ನೀನು ಓದುವಾಗ ನನ್ನ ಮನದ ಸಂಚಿಕೆ ।।

ಮುಗಿದಾದ ಮೇಲೆ ಮಧುರ ಕ್ಷಣವು ಮೂದಲಿಸುತ್ತಿರುವೆ 
ಸಲ್ಲದು ನಿನ್ನ ರೀತಿಯು , ನಿನಗಿದು ತರವೆ ।।
ಓ ಮನದ ಅಂಜಿಕೆ ನೀನೇಕೆ ಬಂದೆ .... 
ಓದುವಾಗ ನನ್ನ ಬಾಳಿನ ಮದುರವಾದ ಸಂಚಿಕೆ .... ।।
             
                                      ನವೀನ 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment