ಹಬ್ಬದ ಅಬ್ಬರ

by 03:56 0 comments
 ದೀಪದ ಹಬ್ಬಕ್ಕೆ , ಇರುಳನ್ನೆಲ್ಲಾ ಬೆಳಕಾಗಿಸುವ ಹಬ್ಬಕ್ಕೆ , ಚಿಟ ಪಟ ಸದ್ದಿನ ಚಿನಕುರುಳಿ ಪಟಾಕಿ ಸೇರಿಸಿ ಮಾಡಿದ ಕವನದ ಪಟಾಕಿ ಆಲಿಸಿ 

ದೀಪದ ಹಬ್ಬ 

ಹೆಜ್ಜೆ ಹೆಜ್ಜೆಗೊಂದು ದೀಪವ ಇಟ್ಟು ,
ಮುಗಿಲನ್ನು ಬಾಣ ಬಿರುಸಿನಿಂದ ಹೊತ್ತಿಸಿ ,
ಎಲ್ಲರ ಬಾಯಲ್ಲಿ ಸಿಹಿಯ ಪಟಾಕಿ ಇಟ್ಟು ,
ಬಣ್ಣದ ಬಲಿಪಾಡ್ಯಮಿಯ ಆಚರಿಸೋಣ ಬನ್ನಿ ।।

ಚಿಟ ಪಟ ಸದ್ದಿನ ಚಿನಕುರುಳಿ ಪಟಾಕಿ ,
ಡಮ್ ಎಂದು ಸಾವಿರ ಹೋಳಾಗುವ ಲಕ್ಷ್ಮಿ ಪಟಾಕಿ ,
ಎಲ್ಲರ ಕಿವಿ ಗುಯ್ ಗುಟ್ಟಿಸುವ ಆನೆ ಪಟಾಕಿ ,
ಸರಸರನೆ ಸುಟ್ಟು ಸುರ್ ಎನ್ನುವ ಸರ ಪಟಾಕಿ ಹಚ್ಚೋಣ ಬನ್ನಿ ।।

ಸಂತೋಷ ,ಸಂಭ್ರಮ ಇಮ್ಮಡಿಗೊಳಿಸುವ ಹಬ್ಬವಿದು ,
ಈರುಳ್ಳಿ ಪಟಾಕಿ ಹಚ್ಚಲು ಅಪ್ಪನ ಕಾಯುವ ,
ಉಳ್ಳಿ ಪಟಾಕಿ ತೋರಿಸಿ ಅಮ್ಮನ ಹೆದರಿಸುವ ,
ತಂಗಿಯ  ಕೈ ಹಿಡಿದು ಸುರ್ ಸುರ್ ಬತ್ತಿ ಹೊತ್ತಿಸುವ ಹಬ್ಬವಿದು ।।

ಹಬ್ಬದ ಆನಂದದಲ್ಲಿ ಮೈ ಮರೆತು ಆಡೋಣ ,
ಹೊಸ ಬಟ್ಟೆ ತೊಟ್ಟು ಮಿರ ಮಿರ ಮಿಂಚೋಣ ,
ಪಟಾಕಿ ಹೊಡೆಯುವಾಗ ಮಾತ್ರ ಎಚ್ಚರದಿಂದಿರೋಣ ,
ಎಲ್ಲರಿಗೂ ದೀಪಾವಳಿ ಹಬ್ಬದ ಶುಭ ಕಾಮನೆಗಳು ।।

                                             ನವೀನ 



manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment