ಸಮಾಜವ ಉದ್ದಾರ ಮಾಡಲು ಹೊರಟ ಮಾನವನೇ ಆ ಸಮಾಜದ ಕೆಡುಕಿಗೂ ಕಾರಣ , ಅಂತಹ ಕೆಲವು ಸಂಧರ್ಭಗಳಿಗೆ ಹಿಡಿದ ಕೈ ಗನ್ನಡಿ ಈ ಕಿರು ಕವನ . ನಿಮ್ಮ ಅನಿಸಿಕೆಗಳನ್ನು ಅನುಭವಗಳನ್ನು ಕಾಮೆಂಟ್ ಅಲ್ಲಿ ತಿಳಿಸಿ
ಮರ್ಕಟ ಮಾನವ
ಮರದಿಂದ ಇಳಿದು ಮನೆಗಳನ್ನು ಕಟ್ಟಿ ,
ಮರಗಳನ್ನು ಕಡಿದು ಮನೆಗಳನ್ನು ಕಟ್ಟಿ ,
ಮರಗಳೇ ಇಲ್ಲವೆಂದು ಮನ ಕರಗಿಬಿಟ್ಟಿ ,
ಮನೆಯೋಳಗೆ ಒಂದೊಂದು ಮರಗಳನು ನೆಟ್ಟಿ ,
ಮಾನವತೆಯ ಸಾರುತಿಹರು ನೋಡೊ ತಮ್ಮ ।।
ಮನದೊಳಗೆ ಮೂಡಿದ ದೈವವ ಗುಡಿಯಲಿಟ್ಟು ,
ಬಕುತಿಗೊಂದೊಂದು ಗೋಪುರವ ಕಟ್ಟಿ ,
ಗೋಪುರಕ್ಕೊಂದಂತೆ ಜಾತಿಯ ಕಟ್ಟಿ ,
ಜಾತಿ ಜಾತಿಯೊಳಗೆ ಬೇಧದ ಬೆಂಕಿ ಇಟ್ಟು ,
ಬೆಂಕಿಯೇ ಭಕುತಿ ಎನುತಿಹರು ಕೇಳೊ ತಮ್ಮ ।।
ಮದುವೆಯಾದ ಮಡದಿಯ ಮನೆಯೊಳಗಿಟ್ಟು ,
ಮಾತಾಡುವ ಮಾನಿನಿಯ ಅಟ್ಟಕ್ಕಿಟ್ಟಿ ,
ಮಾತಾಡುವ ಮಡದಿಯ ಬಾಯಿಕಟ್ಟಿ ,
ಮಾದರಿ ಸಮಾಜ ಕಟ್ಟಲು ಪಣತೊಟ್ಟು ,
ಹೋರಾಡುವ ಭೂಪರಿಗೆ ಏನೆಂದು ಹೇಳುವುದು
ಹೇಳೋ ತಮ್ಮ ।।
ನವೀನ
0 comments:
Post a Comment