ಜೀವದ ಸಮಾನತೆ

by 01:49 0 comments


ಜೀವದ ಸಮಾನತೆ 

ದೇವನೇ ಎಲ್ಲ ಜೀವಿಗೂ ಜೀವದ ಸಮಾನತೆ ಕೊಟ್ಟೆ ,
ಆದರೆ ಬುದ್ದಿಯ ಹಿಟ್ಟನ್ನು ಮಾನವನಿಗೆ ಮಾತ್ರ ಏಕೆ ಬಿಟ್ಟೆ ।।

ನೀ ಕೊಟ್ಟ ಬುದ್ದಿಯ ಹಿಟ್ಟಿಂದ ಸಮಾಜದ ರೊಟ್ಟಿಯ ತಟ್ಟಿ ,
ರೊಟ್ಟಿಯ ಬೇಯಿಸಲು ಜೀವಿಯ ಜೀವವ ಸುಟ್ಟು ।।

ತನ್ನ ರೊಟ್ಟಿಗಾಗಿ ಎಲ್ಲ ಜೀವದ  ರೊಟ್ಟಿಯ ಕಸಿದು ,
ತಾನು ಮಾತ್ರ ಹೊಟ್ಟೆ ಬಿರಿಯುವಂತೆ ಉಂಡು ತಿರುಗಿದ್ದಾನೆ ।।

ಹಸಿದು ಬಸಿದ ಜೀವಿಗಳು ಹಸಿವಿನಿಂದ ಅಸುನೀಗುತ್ತಿರೆ ,
ತನ್ನ ಹಸೆಗೆಂದು ಮತ್ತಷ್ಟು ಜೀವಿಗಳ ಹತ್ಯಾಕಾಂಡವೆಸಗಿದ್ದಾನೆ ।।

ಮಾನವೀಯತೆಯ ಉಳಿಸಿಕೊಂಡ ಕೆಲವರು ಉಳಿಸಲು ಹೋದರೆ ,
ಅಮಾನವೀಯತೆಯ ಹಲವರು ಅಳಿಸಲು ಹೊರಟಿದ್ದಾರೆ ।।

ಈ ಸಮಾಜದ ರೊಟ್ಟಿಯ ಹಂಚಿ ತಿನ್ನುವ ಕೆಲವರು ,
ಯಾವಾಗ ಹಲವರಿಗಿಂತ ಬಲವಂತರಾಗುವರೋ ,

ಅಂದು ಮಾತ್ರ ನೀ ಕೊಟ್ಟ ಅಸಮಾನತೆ ಸಮಾನತೆಯ ಸ್ವಾಮ್ಯ ಸೇರಲು ಸಾಧ್ಯ ।।

                                          ನವೀನ 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment