ಮರದ ಮಡಿಲಲ್ಲಿ ಕುಳಿತಿದ್ದ ನನಗೆ ಆದ ಅನುಭವಕ್ಕೆ ಜೀವ ತುಂಬುವ ಪ್ರಯತ್ನವೇ ಈ ಕವನ . ನಿಮಗೂ ಇಂತಹ ಅನುಭವವಾಗಿದ್ದರೆ ಅದು ಕೇವಲ ಕಾಕತಾಳೀಯ ಮಾತ್ರ .
ಮರದ ಮಡಿಲಲ್ಲಿ
ಮರದ ಮಡಿಲಲ್ಲಿ , ಕುಳಿತಿದ್ದ ನನ್ನ
ಆ ಮುಗಿಲಿನಿಂದ ಚಂದ್ರ ಇಣು ಇಣುಕಿ ನೋಡುತಿದ್ದ
ತಿರುಗಿ ನೋಡಲು ನಾನು , ಮೋಡದ ಹಿಂದೆ ಅವಿಯುತಿದ್ದ ।।
ಮರದ ಮರೆಯಲ್ಲಿ ,ಕುಳಿತಿದ್ದ ನನಗೆ
ಈ ಬೀಸೊ ಗಾಳಿಯೇಕೋ ತಂಪೆರಚಿ ಓಡುತ್ತಿತ್ತು
ಹಿಡಿಯಲು ಹೋದರೆ ಹಿಂದೆ ತಪ್ಪಿಸಿಕೊಂಡು ಹಾರುತ್ತಿತ್ತು ।।
ಮರದ ಮಡಿಲಲ್ಲಿ ಮತ್ತೆ ಕೂತ ನನ್ನ
ಕೂತ ಜಾಗವೇಕೋ ತಿವಿ ತಿವಿದು ಚುಚ್ಚುತಿತ್ತು
ನಾ ಕೂತ ಜಾಗವೇಕೋ ನನ್ನನೇ ದೂಡುತಿತ್ತು ।।
ಮರದ ಮಡಿಲಿಂದ ಬಯಲಿಗೆ ಬಂದೆ ನಾನು ,
ಗಾಳಿಯೇಕೋ ಒಡುತಿಲ್ಲ ,ಚಂದ್ರನೇಕೋ ಅವಿಯುತಿಲ್ಲ ,
ಚುಚ್ಚುತಿದ್ದ ನೆಲವೂ ದೂಡುವಾಸೆ ತೋರುತಿಲ್ಲ ।।
ಮರದ ಮಡಿಲಿಂದ ಮನೆಯೆಡೆಗೆ ನಡೆದೆ ನಾನು
ಮತ್ತೆ ಏಕೋ ಚಂದ್ರ ಮರೆಯಾಗಿ ಕೆಣಕುತಿದ್ದ ....
ಮರದ ಮಡಿಲಲ್ಲಿ .............
ನವೀನ
0 comments:
Post a Comment