ಮಳೆಯ ಮುತ್ತಿನ ಹನಿಗೊಂದು ಜೀವ ತುಂಬಿ , ಮಿಂಚು ಗುಡುಗುಗಳೇ ಅದರ ತಂದೆ ತಾಯಿಯನ್ನಾಗಿ ಮಾಡಿ. ಮಳೆಹನಿಯ ಆಶಯ ಮತ್ತು ಭಾವನೆ , ಭೂಮಿಯ ನೈರ್ಮಲ್ಯ ದಲ್ಲಿ ಹೇಗೆ ಕೊಚ್ಚಿ ಹೋಗುವುದು ಎನ್ನುವುದೇ ಈ ಕವನದ ಭಾವ.
ಮಿಂಚಿನ ಒಡಲಿನ ಮುತ್ತು ಭೂಮಿಗೆ ಬಿತ್ತು
ಮಿಂಚಿನ ಒಡಲಲ್ಲಿ ಮುತ್ತೊಂದು ಮೂಡಿತ್ತು ,
ಮಿಂಚನ್ನೇ ನೋಡಿ ಭಯಪಟ್ಟು ಓಡಿತ್ತು ,
ಓಡುತ ತಾ ಬಂದು ಮೋಡದಿಂದ ಜಿಗಿದಿತ್ತು ,
ಗಾಳಿಯಲ್ಲಿ ತೆಲುತಾ ಭೂಮಿಯನ್ನು ಕಂಡಿತ್ತು ,
ಸುಂದರ ಭೂಮಿಯ ತೋಳಲ್ಲಿ ಅಡಕವಾಗಲು ಬಯಸಿತ್ತು ,
ಭೂಮಿಯ ತೀರ ಹತ್ತಿರವಾಗುತಿತ್ತು ,
ಭೂಮಿಯ ಸೌಂದರ್ಯ ಏಕೋ ಮಸುಕಾಗಲು ಆರಂಭಿಸಿತ್ತು ,
ಮಸುಕಿನ ಮುಂದೆ ಹರಿಯುವ ಕೊಳಗೇರಿ ಕಾಣಿಸಿತ್ತು ,
ಹೋಗಬೇಡ ಎಂಬ ಗುಡುಗು ತಾಯಿಯ ಕೂಗು ಈಗ ಕೇಳಿಸಿತ್ತು ,
ತಪ್ಪಿನ ಅರಿವಾಗುವುದರಲ್ಲಿ ಕೊಚ್ಚೆಯಲ್ಲಿ ಸೇರಿಹೋಗಿತ್ತು ,
ಕಪ್ಪೆ ಚಿಪ್ಪಿನಲ್ಲಿ ಸೇರಿ ಮಿಂಚಿನ ಮುತ್ತಾಗುವೆ ಎನ್ನುವ ,
ಆಶಯ ಕಪ್ಪು ನೀರಲ್ಲಿ ಕರಗಿ ಹೋಗಿತ್ತು....।।
- ನವೀನ
ನಿಮ್ಮ ಅನಿಸಿಕೆಗಳನ್ನು comment section ಅಲ್ಲಿ ತಿಳಿಸಿ ..................................
0 comments:
Post a Comment