Corporate ಕಾನನದ ಕುಸುಮಗಳು

by 00:38 0 comments
Corporate ಜಗತ್ತಿನಲ್ಲಿ ಜೀವನ ಕಂಡುಕೊಳ್ಳುತ್ತಿರುವ , ಎಲ್ಲ ಗೆಳಯ , ಗೆಳತಿಯರಿಗೆ . ಈ ಕವನ ಕುಸುಮ ಅರ್ಪಣೆ .... 

Corporate ಕಾನನದ ಕುಸುಮಗಳು

Corporate ಕಾನನದ ಕುಸುಮಗಳು ನಾವು,
ನಾವು ನೋಡಲು ಬಹಳ ಚೆಂದ,
ನಮ್ಮ companyಯ ಹೂದೋಟದಂತೆ ನಮ್ಮ ಬಾಳು,
ನೊಡಲು ಬಹಳ ಅಂದ..!


Campus placement ಎಂಬ ನರ್ಸರಿಯಿಂದ ತಂದು,
Company ತೋಟದಲ್ಲಿ  Induction ಮಾಡಿ,
Training ಎಂಬ ಕತ್ತರಿಯಿಂದ ಕಸಿ ಮಾಡಿ,
Software ತೋಟದಲ್ಲಿ ಬೆಳೆಯಬಿಡುವರು ||



ಬೆಳೆಯುವ ನಮ್ಮ ಬೇರೆ ಬಾಹುಗಳನ್ನು ಆಗಾಗ್ಗೆ ಕತ್ತರಿಸಿ,
ತೋಟದ ಗಿಡಗಳಂತೆ ಸಮನಾಗಿ ಕಾಣುವಂತೆ ಮಾಡುವರು,
ಕೆಲವರನ್ನು ತೆಗೆದು Manager ಎಂಬ pot ಅಲ್ಲಿ ಹಾಕಿ,
ನಮ್ಮ ಸುತ್ತಲೆ ಇಡುವರು||


ಎಲ್ಲರೂ ಒಂದೇ ಇಲ್ಲಿ,ಅದೇ ಹುಸಿ ನಗೆ,
ಅದೇ ಪೊಳ್ಳು ಆಡಂಬರ, ಅದೇ ಹೊಸ Mobileಉ
ಅದೇ ಸತ್ತ Pizza , ಉಗುಳಲು ಆಗದ Coke ಉ,
ಹೊಟ್ಟೆ ಕರಗಿಸಲು ಒಡಾಡುವ ಹುಡುಗರು,
ಸಮಾನತೆ ಗಾಗಿ ಸಿಗರೇಟು ಸೇದುವ ಹುಡುಗಿಯರು ||


ಮೆದುಳಿನ ಮೂಲೆಯಲ್ಲಿ ಎಲ್ಲೊ ಒಂದು ಕೂಗು,
ನಾವೇಕೆ ನಮ್ಮ ತನವನ್ನು ಮಾರಿಕೊಂಡು,
ಬೇರೆಯವರ Remote Control ನ Robo ಗಳಂತೆ ಬದುಕುತಿದ್ದೆವೆ.....?

                                                   
                                                                                   ನವೀನ
ಮುಂದಿನ ಕವನಗಳಿಗೆ ಈ ಬ್ಲಾಗ್ ಅನ್ನು ಎದುರುನೋಡುತ್ತಿರಿ ............................................
ಇಷ್ಟವಾದರೆ ಒಂದು Like  ಮಾಡಿ , ಚೆನ್ನಾಗಿದ್ದರೆ ಒಂದು Share ಮಾಡಿ  

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment