ಈ ಕವನದ ಸಾಲುಗಳು ನನ್ನ ಮನದಾಳದ ಮಾತುಗಳು , ನನ್ನ ಬಾಳಿನ ಮನ್ವಂತರದ ನುಡಿಗಳು . ಬರಿಯ ಭಾವನೆಗಳಿಗೆ ಬಣ್ಣ ಹಚ್ಚಿ ಬರೆದಿರುವೆ . ಬಣ್ಣನೆ ಹೆಚ್ಚಾದರೆ ಹುಚ್ಚೆಂದು ಬಾವಿಸಬೇಡಿ .
ಈ ಕಾವ್ಯ ನನ್ನ ತಾಯಿ ದೇವರಿಗ ಅರ್ಪಿತ ...................
ತಾಯಿಗಿಂತ ದೇವರಿಲ್ಲ
ತನಗಿಂತ ಮಿಗಿಲಾದ ದೈವವನ್ನು ಸೃಷ್ಟಿಸಿದ ,
ತಾನು ಪಡೆಯದ ಪ್ರೀತಿಯನ್ನು ,
ಪ್ರತಿಯೊಂದು ಜೀವಿಯು ಪಡೆಯಲೆಂದು ।।
ಧರೆಗೆ ಕಳುಹಿದ ತಾಯಿಯೆಂಬ ಹೆಸರಿಟ್ಟು ,
ಪಡೆದೆ ನಾನು ಸಾವಿರ ಜನುಮ ಪುಣ್ಯವಿತ್ತು ।।
ನಾ ಹಸಿವ ಮುನ್ನ ನನಗುಣಿಸಿದೆ ನೀನು ,
ನಾ ನುಡಿವ ಮುನ್ನ ನನ್ನರಿತೆ ನೀನು ,
ನಾ ಹೆದರಿದಾಗ ನನ್ನ ದೈರ್ಯವಾದೆ ನೀನು ,
ನಾ ಅತ್ತಾಗ ನನ್ನ ಕಂಬನಿಯಾದೆ ನೀನು ।।
ನಡೆದ ದಾರಿಗೆಲ್ಲ ಸ್ಪೂರ್ಥಿಯಾದೆ ನೀನು ,
ಮಾಡಿದ ತಪ್ಪಿಗೆಲ್ಲ ಕ್ಷಮೆಯಾದೆ ನೀನು,
ಮಾಡದ ತಪ್ಪಿಗೆ ಸಾಂತ್ವನವಾದೆ ನೀನು ,
ಬೀಳುವ ಮುನ್ನ ಎಚ್ಚರವಾದೆ ನೀನು ,
ಬಿದ್ದ ಮೇಲೆ ನನಗಿಂತ ನೊಂದೆ ನೀನು ।।
ನಿನಗಿಂತ ದೇವರಿಲ್ಲ , ಇದ್ದರು ಅದು ನೀನಾಗಲ್ಲ ,
ಬೆಲೆ ಕಟ್ಟಲಾಗದ ನಿನ್ನ ಪ್ರೀತಿಗೆ ,
ನನ್ನ ಪ್ರೀತಿಯ ಪುಟ್ಟ ಕಾಣಿಕೆ ಇದು ಅಮ್ಮ ।।
- ನವೀನ
ಮುಂದಿನ ಕವನಗಳಿಗೆ ಈ ಬ್ಲಾಗ್ ಅನ್ನು ಎದುರುನೋಡುತ್ತಿರಿ ............................................
ಇಷ್ಟವಾದರೆ ಒಂದು Like ಮಾಡಿ , ಚೆನ್ನಾಗಿದ್ದರೆ ಒಂದು Share ಮಾಡಿ
ಇಷ್ಟವಾದರೆ ಒಂದು Like ಮಾಡಿ , ಚೆನ್ನಾಗಿದ್ದರೆ ಒಂದು Share ಮಾಡಿ
Bahala chennagide Naveen.. :)
ReplyDeleteBahala chennagide Naveen.. :)
ReplyDeleteThanks Harsha
ReplyDeleteಒಳ್ಳೆ ಪ್ರಯತ್ನ ನವೀನ್...ಆದ್ರೆ ವ್ಯಾಕರಣ ಅಲ್ಲಲ್ಲಿ ತಪ್ಪಾಗಿದೆ..ಸರಿ ಮಾಡು...ಶುಭವಾಗಲಿ..!
ReplyDelete