ತಳುಕಿನ ಊರಲ್ಲಿ ಕಳೆದುಕೊಂಡ ಬಾಳಿನ ಬಣ್ಣ

by 06:14 0 comments

ಕತ್ತಲಾದರೂ ಕತ್ತಲಾಗದ  ಊರಲ್ಲಿ ಬದುಕು ಕಟ್ಟಿ , ಬವಣೆಯ ಕುಟ್ಟಿ , ಧ್ಯೇಯವ ಸುಟ್ಟು ಬದುಕುವ ಬಾಳಿಗೆ ಒಂದು ವಿಮರ್ಶೆ ........


ತಳುಕಿನ ಊರಲ್ಲಿ ಕಳೆದುಕೊಂಡ ಬಾಳಿನ ಬಣ್ಣ

ಸೂರ್ಯ ಮುಳುಗಿದರೂ ಕತ್ತಲಾಗದ ತಳುಕು ಬಳುಕಿನ ಊರಲ್ಲಿ,
ಯಾಂತ್ರಿಕತೆಯೇ  ಪ್ರತಿಯೊಬ್ಬರ ಜೀವನ ಎನಿಸುವ ನಾಡಲ್ಲಿ,
ಸೃಜನಶೀಲತೆಯೇ  ಜೀವನದ ಧ್ಯೇಯವಾಗಿ ಬಾಳುವ ಮನುಜನ ಕಂಡೆ,
ಏಕತಾನತೆಯ ಬಾಳಿನಿಂದ ಹೊರಗೆ ಬಂದ ಮಾನವನ ಕಂಡೆ.. ।।



ಮನಸ್ಸಿನಲ್ಲಿ ಸಾವಿರಾರು ಧ್ಯೇಯ ಇದ್ದರೂ ಸದಾ, 
ಕಾರಣ ಕೊಟ್ಟು ನಾಳೆಯೆಂದು ಬಾಳುವವರ ನಡುವೆ,
ನಾಳೆ ಎಂಬುದೇ ಇಲ್ಲ, ಇಂದೆ ನನಗೆಲ್ಲ ಎಂದು,
ಈ ಕ್ಷಣದಲ್ಲಿ ಬಾಳುವ ಧೀರನ ಕಂಡೆ ...।।



ಬದುಕಿನ ಬವಣೆಯನ್ನು, ಬಣ್ಣದ ನವಣೆಯನ್ನಾಗಿ ಮಾಡಿ,
ನಲ್ಮೆಯಿಂದ ಬಣ್ಣಿಸುತ್ತಾ ಉಣ್ಣುವ ತರವ ಕಂಡೆ,
ಚಿನ್ನದ ಬೇಡಿಯ ಮೋಹದ ಬಂಧನದಿಂದ ಬಿಡಿಸಿಕೊಂಡು,
ಭವ ಜಲಧಿಯ ದೂರವ ಭತಿಸುವ ಭಾವ ಕಂಡೆ.. ।।



ಕಂಡು ಬೆರಗಾಗಿ, ಬೆರಗು ಬದುಕಾಗೆ,
ಭವದ ಬವಣೆಯೇ, ಬಾಳಿನ ಚರಕವು, 
ಚರಕದಿ ನೇಯ್ದ , ಬದುಕಿನ ಬಟ್ಟೆಗೆ
ಸೃಜನತೆಯ ಬಣ್ಣ ಕಟ್ಟಿ ಬದುಕೋಣ......

                                       
                                    ನವೀನ

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment