ರವಿಗೊಂದು ಕವಿಯ ಕರೆ
ಓ ಮೂಡಣದವನೆ ,ಬಂದು ನೋಡು ಈ ಧರೆಗೆ.
ಸಸ್ಯಶಾಮಲೆಯಾದ ಸುಂದರ ಭೂಮಿಯ ನೋಡು ।।
ಜುಳು ಜುಳು ನಾದವ ಮೀಟುತ ಜೇಂಕಾರ ನುಡಿಸಿರುವ ಕಾವೇರಿಯ ನೋಡು ।।
ಹನಿ ಹನಿಯ ಹಬ್ಬಕ್ಕೆ ನಲಿದು ನರ್ತಿಸುವ ನವಿಲನ್ನು ನೋಡು ।।
ಸ್ವರ್ಗವನ್ನೆ ನಾಚಿಸುವಂತ ಅಲಂಕಾರ ರಚಿಸಿರುವ ಹೂ ರಾಶಿಯ ನೋಡು ।।
ಮಂಜಿನ ಹನಿಗಳ ಹೊತ್ತು ತರುವ ಮಲಯ ಮಾರುತವ ನೋಡು ।।
ಕಲ್ಲಿನ ಪರ್ವತಗಳು ದೂರ ದೂರ ಹೋದಂತೆ ಮಂಜಲ್ಲಿ ಮರೆಯಾಗುವ ಅಧ್ಬುತವ ನೋಡು ।।
ಬರಡು ಭೂಮಿ ಇದು ನಿನ್ನಿಂದ ವರ್ಣಮಯವಾದ ವಿಸ್ಮಯವ ನೋಡು ।।
ನಿನ್ನ ಬರುವಿಕೆಯನ್ನೇ ಕಾಯುವ ಪಕ್ಷಿ ಸಂಕುಲವ ನೋಡು ।।
ನಿನ್ನನ್ನೇ ಉಸಿರಾಗಿಸಿಕೊಂಡ ಸೂರ್ಯ ಕಾಂತಿಯ ನೋಡು ।।
ಓ ಮೂಡಣದವನೆ , ಬಾ ನೀ ಧರೆಗೆ ,
ನಿನ್ನ ಸೃಷ್ಟಿಯ ಸೊಬಗ ಒಮ್ಮೆ ಸವಿದು ಹೋಗು ।।
ನವೀನಸ್ಫೂರ್ತಿ
0 comments:
Post a Comment