ಸದ್ದಿಗೆ ಕಾಯುವ ಸಮಯ

by 03:52 0 comments
          
ಸದ್ದಿಗೆ ಕಾಯುವ ಸಮಯ

ಸಮಯ ಈ ಸಮಯ

ಸಮಯಕ್ಕೆ ಕಾಯುವ ಸಮಯ,
ಸಮಯದ ಗಾಳಿಗೆ ಸಿಲುಕಿ ಸಮಯವ ದೂಡುವ ಸಮಯ,
ಸಮಯದಿ ಸಿಗುವ ಸದ್ದಿಗೆ ಕಾಯುತಿದೆ  ಹೃದಯ.||


ಹೃದಯ ಈ ಹೃದಯ,

ಜೀವದ ಜೀವವ ಕಾಯುವ ಈ ಹೃದಯ,
ಜಗದಿ ಕಾಲಿಡುವ ಪುಟ್ಟ ಜೀವಕ್ಕಾಗಿ,
ಕಾಯುತಿದೆ ಈ ಹೃದಯ.||


ಕಾಯುವ ಸುಖವ ಸಾಗುವ ಕ್ಷಣವ,

ಬರೆಯಲು ಆಗದು ಅನುಭವದ ಪಥವ,
ಬದುಕಿನ ಆದಿಯ ಬಗೆಯ,
ಹೊಗಳಲು ಸಾಲದು ಸಮಯ.||


ಸಮಯದಿ ಸಾಗುವ ಸಮಯ,

ಸಮಯಕ್ಕೆ ಕಾಯುವ ಸಮಯ,
ಸರಿದರೆ ಬಾರದು ಇಂತಹ ಸಮಯ,
ಜೀವನ ಇರುವಷ್ಟು ಸಮಯ ||


ಸಮಯದಿ ಕಾಯುತಿದೆ ಹೃದಯ,

ಹೃದಯದ ಒಳಗೊಂದು ವಿಷಯ.||

ವಿಷಯ ಈ ವಿಷಯ,

ವರವೊಂದು ಭೂಮಿಗೆ ಬರುವ ವಿಷಯ,
ಬಂದು ಮಾವನ ಮಾಡೋ ವಿಷಯ,
ತಂಗಿಯ ಮಡಿಲು ತುಂಬೊ ವಿಷಯ,
ಮಡಿಲು ತುಂಬಿ ಕೊಡುವ ಖುಷಿಯ.||


ಖುಷಿಯ ಈ ಖುಷಿಯ,

ಕರೆತ ರುವ ಬಾಲ ಕೃಷ್ಣನ ವಿಷಯ,
ಕೇಳಿ ಹಾಡುತಿದೆ ಈ ಹೃದಯ,
ಹೃದಯಕ್ಕೆ ಹಬ್ಬದ ಸಮಯ.||


ಸಮಯ ಈ ಸಮಯ,

ತಂದಿಟ್ಟ ಸವಿಯ, ನೀಡಿದ ಸುಖವ,
ಎಂದು ಮರೆಯಲಾರದು ಈ ನನ್ನ ಹೃದಯ..||


                                              ನವೀನ

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment