ಕಾಡಿಗೆ ಚೆಲುವೆ

by 00:03 0 comments

ಕಾಡಿಗೆ ಚೆಲುವೆ 


ಕಣ್ಣ ಕೊನೆಗೆ ಕಾಡಿಗೆ ಹಚ್ಚಿದ್ದ ಕನ್ನಿಕೆ ,
ಕುಡಿ ನೋಟ ಬೀರಿದ್ದಳು ಬಳುಕುತ್ತಾ ಮೆಲ್ಲಕೆ ,
ಮಾತಿಗೆ ತಾಳ ಹಾಕಿದ್ದವು ಅವಳ ಜುಮುಕಿ ,
ಹುಬ್ಬಿನ ಬಿಲ್ಲೇರಿತ್ತು ಹಣೆಯು ಮಡುಕಿ ।।

ಬಣ್ಣ ಬಣ್ಣದ ಚಿತ್ತಾರವಿದ್ದ ಬಟ್ಟೆ ತೊಟ್ಟು ,
ಮುದ್ದಾದ ಮಲ್ಲಿಗೆಯೊಂದ ಮುಡಿಯಲ್ಲಿಟ್ಟು ,
ಮಿಂಚಿನ ಮಣಿ ಮಾಲೆಯ ಕೊರಳಲ್ಲಿ ಧರಿಸಿ ,
ಮುದ್ದಾದ ಮಂದಹಾಸವ ಬೀರುತ್ತಿದ್ದೆ ।।

ಬ್ರಹ್ಮನ ಬದಲು ಮನ್ಮಥನು ಸೃಷ್ಟಿಸಿದನ ನಿನ್ನ ,
ಬೇಲೂರ ಶಿಲ್ಪವೇಕೋ ನಾಚಿತ್ತು ನೋಡಿ ನಿನ್ನ ಅಂದವನ್ನ ,
ನವಿಲೇಕೋ ನಿಂದಿಸಿದೆ ಈ ನಿನ್ನ ಸೌಂದರ್ಯದ ಸೊಬಗನ್ನ ,
ಚಂದ್ರನನ್ನೇ ಮರೆಯಾಗಿಸಿತು ನಿನ್ನ ಕೆನ್ನೆಯ ಕಾಂತಿಯ ಬಣ್ಣ ।।

ಹಬ್ಬದ ಹೋಳಿಗೆ ಸಿಕ್ಕಿತ್ತು ಹುಬ್ಬಿನ ಕೆಳಗಿದ್ದ ಕಣ್ಣಿಗೆ ,
ಸಕ್ಕರೆ ಬೆಲ್ಲದ ಪಾಕದ ಸವಿಯಿತ್ತು ಎದೆಯೊಳಗಿದ್ದ ಮನಸ್ಸಿಗೆ ,
ಸ್ವಪ್ನದ ಚೆಲುವೆ ಸಿಕ್ಕಿದ್ದ ಸೊಗಸಿತ್ತು ತಲೆಯಲ್ಲಿದ್ದ ಮೆದುಳಿಗೆ ,
ಸಂಗಾತಿಯಾಗುವೆಯ ಸಂಗವ ಸೇರಿ ಎಂದು ಹೇಳಲ ಸಿದ್ದವಾಗಿತ್ತು ನಾಲಿಗೆ .. 

ಅಷ್ಟರಲ್ಲೇ  ............... 
....... ಮುಂದುವರೆಯುವುದು 
                                                         ನವೀನ 

manvantarada-kavithegalu

Manvantarada Kavi

Kavana havyasa , coding dinakelasa

0 comments:

Post a Comment